ರಾಜಮನೆತನಗಳ ಪ್ರಮುಖ ಅಂಶಗಳು. ೧) ಮೌರ್ಯರು : ━━━━━━━━━ ರಾಜ್ಯದ ನಾನಾ ಭಾಗಗಳಲ್ಲಿ ದೊರೆತಿರುವ ಶಾಸನಗಳು ಕನ್ನಡನಾಡು ಉತ್ತರದ ಮೌರ್ಯರ ಆಡಳಿತಕ್ಕೆ ಕ್ರಿ.ಪೂ. 3ನೇ ಶತಮಾನದಲ್ಲಿ ಒಳಪಟ್ಟಿತ್ತು ಎಂದು ಸಾರುತ್ತವೆ. ಮೌರ್ಯರ ಹೆಸರಾಂತ ದೊರೆ ಅಶೋಕ (ಕ್ರಿ.ಪೂ. 273-233) ನ ಶಾಸನಗಳು ರಾಜ್ಯದ 11 ಸ್ಥಳಗಳಲ್ಲಿ ಕಂಡು ಬಂದಿವೆ. * ಚಂದ್ರಗುಪ್ತ ಮೌರ್ಯನು ತನ್ನ ಗುರು ಭದ್ರಬಾಹುವಿನೊಡನೆ ಕರ್ನಾಟಕದ ಶ್ರವಣ ಬೆಳಗೊಳದಲ್ಲಿ ಬಂದು ನೆಲೆಸಿದ್ದನು. * ಅಶೋಕನ ಕರ್ನಾಟಕದ ಪ್ರಾಂತ್ಯಗಳ ರಾಜಧಾನಿಗಳು : ಸುವರ್ಣಗಿರಿ, ಇಸಿಲ, ತೊಸಿಲ, ಸಂಪ. * ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳು : - ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಅ.ಸಿದ್ದಾಪುರ, ಜಿ.ರಾಮೇಶ್ವರ. - ರಾಯಚೂರು ಜಿಲ್ಲೆಯ ಗವಿಮಠ,ಮಾಸ್ಕಿ, ಪಾಲ್ಕಿಗುಂಡು, ಕೊಪ್ಪಳ. - ಗುಲ್ಬರ್ಗಾ ಜಿಲ್ಲೆಯ ಸನ್ನತಿ. - ಬಳ್ಳಾರಿ ಜಿಲ್ಲೆಯ ನಿಟ್ಟೂರು, ಉದೇಗೊಳ್ಳಂ ೨) ಶಾತವಾಹನರು (ಕ್ರಿ.ಪೂ. 238 - ಕ್ರಿ.ಶ 225) : ━━━━━━━━━━━━━━━━━━━━━━━━━━━━━━ ━━━━━━━━━━━ ಮೌರ್ಯರ ಸಾಮಂತರಾಗಿದ್ದ ಇವರು, ಮೌರ್ಯರ ನಂತರ ಸ್ವತಂತ್ರರಾಗಿ, (ಕ್ರಿ.ಪೂ. 225 ರವರೆಗೆ ಆಳ್ವಿಕೆ ನಡೆಸಿದರು. * ಇವರ ರಾಜಧಾನಿ : ಪೈತಾನ್ ಅಥವಾ ಪ್ರತಿಷ್ಠಾನ. * ಇವರ ಲಾಂಛನ : ವರುಣ. * ಇವರೇ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆಯನ್...