Marry curry (ಮೇರಿ ಕ್ಯೂರಿ)
ಮೇರಿ ಕ್ಯೂರಿ
◆◆ಜೀವನ◆◆
ಮೇರಿ ಕ್ಯೂರಿ ಯುರೇನಿಯಂ ಅದಿರನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ವಿಜ್ಞಾನಿ. ಇವರು ಪೋಲ್ಯಾಂಡಿನ ಖ್ಯಾತ ಮಹಿಳಾ ವಿಜ್ಞಾನಿ. ೧೮೬೭ರಲ್ಲಿ ಪೋಲ್ಯಾಂಡಿನ ವಾರ್ಸಾದಲ್ಲಿ ಇವರು ಜನಿಸಿದರು. ಮೇರಿ ಕ್ಯೂರಿಯ ಮೊದಲ ಹೆಸರು ಮೇರಿಸ್ಲೋ ಡೋವ್ಸಾ. ಪಿಯರೆ ಕ್ಯೂರಿಯೊಂದಿಗೆ ವಿವಾಹವಾದ ನಂತರ ಇವರ ಹೆಸರು ಮೇರಿ ಕ್ಯೂರಿ ಎಂದಾಯಿತು.
ಚಿಕ್ಕಂದಿನಿಂದಲೇ ಚತುರೆಯಾಗಿದ್ದ ಇವರು, ಪ್ರೌಢಶಾಲೆ ಯಲ್ಲೇ ಚಿನ್ನದ ಪದಕವನ್ನ ಗಳಿಸಿದ್ದರು. ೧೮೯೧ರಲ್ಲಿ ಇವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ಯಾರಿಸ್ ತೆರಳಿದರು. ಅಲ್ಲಿನ ಸೌಖನ್ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್.ಸಿ ಪದವಿಯನ್ನು ಪಡೆದರು. ಅಲ್ಲೇ ಇವರಿಗೆ ಪಿಯರಿ ಕ್ಯೂರಿಯ ಪರಿಚಯವಾಗಿದ್ದು. ವಿವಾಹದ ನಂತರ ಇಬ್ಬರೂ ಜತೆಗೂಡಿ ಸಂಶೋಧನೆಯನ್ನ ಕೈಗೊಂಡರು.
★★ಸಾಧನೆ★★
ಸಾಮಾನ್ಯ ರೂಪದಲ್ಲಿ ಸಿಗುವಂತ ಯುರೇನಿಯಂ ಅದಿರಿನಲ್ಲಿ ಇನ್ನೊಂದು ವಿಕಿರಣ ಧಾತು ಇರಬೇಕೆಂದು ಕಂಡುಹಿಡಿದರು. ಇವರು ರೇಡಿಯಂ ಹಾಗೂ ಪೊಲೋನಿಯಂ ಎಂಬ ಎರಡು ಮೂಲಧಾತುಗಳನ್ನ ಕಂಡುಹಿಡಿದರು. ೧೯೦೩ರಲ್ಲಿ ರೇಡಿಯಂ ಅನ್ನು ಪ್ರತ್ಯೇಕಿಸಲು ಕ್ಯೂರಿ ದಂಪತಿಗಳು ಹಾಗೂ ಫ್ರೆಂಚ್ ಭೌತವಿಜ್ಞಾನಿ ಬೇಕೆರಲ್ ಭೌತವಿಜ್ಞಾನದ ನೋಬಲ್ ಪ್ರಶಸ್ತಿಯನ್ನ ಹಂಚಿಕೊಂಡರು. ೧೯೧೧ರಲ್ಲಿ ಮೇರಿ ಕ್ಯೂರಿ ರಸಾಯನ ಶಾಸ್ತ್ರ ವಿಭಾಗದಲ್ಲಿ ನೋಬಲ್ ಪ್ರಶಸ್ತಿ ಪಡೆದರು. ನೋಬಲ್ ಪ್ರಶಸ್ತಿ ಪಡೆದ ಮೊದಲ ಮಹಿಳಾ ವಿಜ್ಞಾನಿ ಎಂಬ ಹೆಗ್ಗಳಿಕೆ ಇವರದು. ಇವರು ಪ್ಯಾರಿಸ್ ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಪ್ರಾಧ್ಯಾಪಕಿ.
೧೯೩೪ ರ ಜುಲೈ ೪ ರಂದು ಫ್ರಾನ್ಸ್ನಲ್ಲಿ ವಿಕಿರಣದ ರಕ್ತ ಕ್ಯಾನ್ಸರ್‍ನಿಂದ ವಿಧಿವಶರಾದರು.
Comments
Post a Comment