indian economy

ಭಾರತದ ಆರ್ಥಿಕ ವ್ಯವಸ್ಥೆ *⃣ಭಾರತದ ಆರ್ಥಿಕ ವ್ಯವಸ್ಥೆ ಪಿ.ಪಿ.ಪಿ ವುಳ್ಳ ಜಿ.ಡಿ.ಪಿ ಪ್ರಕಾರ $೩.೩೬೨೯ ಕೋಟಿ ಹೊಂದಿ ವಿಶ್ವದಲ್ಲೇ ನಾಲ್ಕನೆಯ ಸ್ಥಾನದಲ್ಲಿದೆ ಮತ್ತು ಅಮೇರಿಕನ್ ಡಾಲರಿನಲ್ಲಿನ ಒಟ್ಟೂ ದೆಶಿಯ ಉತ್ಪನ್ನ(ಜಿ.ಡಿ.ಪಿ)ಪ್ರಕಾರ $೬೯೧.೮೭೬ ಕೋಟಿ ಹೊಂದಿ ವಿಶ್ವದಲ್ಲೇ ಹತ್ತನೆಯ ಸ್ಥಾನದಲ್ಲಿದೆ ಮತ್ತು ಪ್ರತಿ ವರ್ಷವು ೬.೨% ಪಿ.ಪಿ.ಪಿ ಯಲ್ಲಿ ಬೆಳೆಯುತ್ತಿದೆ. ಆದರೆ, ಅತಿ ದೊಡ್ಡ ಜನಸಂಖ್ಯೆಯಿಂದಾಗಿ ಭಾರತದ ಒಬ್ಬ ವ್ಯಕ್ತಿಯ ಸಂಬಳ ಕೇವಲ $3,100 (ಪಿ.ಪಿ.ಪಿ ಪ್ರಕಾರ). *⃣ದೇಶದ ಆರ್ಥಿಕ ವ್ಯವಸ್ಥೆಯು ವಿಭಿನ್ನವಾಗಿದೆ ಹಾಗು ಕೃಷಿ, ಕೈಗಾರಿಕೆ, ಉದ್ದಿಮ್ಮೆಗಾರಿಕೆ ಹಾಗು ಅನೈಕ ಸೇವಾಗಾರಿಕೆಗಳನ್ನು ಒಳಗೊಂಡಿದೆ. *⃣ಸೇವಾಗಾರಿಕಯು ಭಾರತದ ಆರ್ಥಿಕ ಬೆಳವಣಿಗೆಗೆ ಕಾರಣವಾದ ಮುಖ್ಯ ವಲಯವಾದರೂ, ಶೇಖಡ ೬೬% ರಷ್ಟು ಭಾರತೀಯರು ತಮ್ಮ ಜೀವನೋಪಾಯವನ್ನು, ಪ್ರತ್ಯಕ್ಷವಾಗಿ ಇಲ್ಲಾ ಪರೋಕ್ಶವಾಗಿ, ಕೃಷಿಗಾರಿಕೆಯಲ್ಲಿ ಸಂಪಾದಿಸುತ್ತಾರೆ. *⃣ಈಚೆಗೆ, ಭಾರತವು ತನ್ನ ಆಂಗ್ಲ ಭಾಷೆ ಬಲ್ಲ ವಿದ್ಯಾವಂತ ಉದ್ದಿಮೆಗಾರರನ್ನು ಹೊಂದಿರುವ ಕಾರಣದಿಂದಾಗಿ, ಬೇರೆ ದೇಶಕ್ಕೆ ಮಾಹಿತಿ ತಂತ್ರಾಂಶಗಳನ್ನು ರಫ್ತುಮಾಡುತ್ತಿದೆ ಹಾಗು ಆರ್ಥಿಕ ಸೇವೆಯನ್ನು ಮತ್ತು ಇಂಜಿನಿಯರ್ ರನ್ನು ಒದಗಿಸುತ್ತಿದೆ. *⃣ಸ್ವತಂತ್ರ ಭಾರತದ ಹೆಚ್ಚಿನ ಇತಿಹಾಸದಲ್ಲಿ, ಸಮಾಜವಾಧಿ ತತ್ವಗಳಿಂದ ಪ್ರೇರಿತವಾದ ಆರ್ಥಿಕ ನೀತಿಯನ್ನು ಪಾಲಿಸಲಾಯಿತು. ಈ ಕಾರಣ, ಸರ್ಕಾರವು, ಖಾಸಗಿ ವಲಯದಲ್ಲಿ ಭಾಗವಹಿಸುವಿಕೆ, ವಿದೇಶಿ ವ್ಯಾಪಾರ ಹಾಗು ಬಂಡವಾಳಗಳ ಮೇಲೆ ಕಠಿಣ ಕಡಿವಾಣ ಮತ್ತು ಕಾಯದೆ ಹಾಕಿತ್ತು. *⃣೧೯೯೦ ರಿಂದ, ಭಾರತವು ವಿದೇಶಿ ವ್ಯಾಪಾರ ಹಾಗು ಬಂಡವಾಳಗಳ ಮೇಲಿನ ಕಡಿವಾಣ ಹಾಗೂ ಕಾಯದೆಗಳನ್ನು ತೆಗೆದುಹಾಕಿ, ವಾಣಿಜ್ಯದ ಮೇಲಿನ ಸರ್ಕಾರದ ಹಿಡಿತವನ್ನು ಬಿಡಲಾಗಿದೆ. *⃣ ಸರ್ಕಾರಿ ವಲಯದ ಉದ್ಧಿಮೆಗಳ ಮಾರಾಟವು ಹಾಗು ಸರ್ಕಾರಿ ವಲಯಗಳಲ್ಲಿ ಖಾಸಗಿ ಹಾಗು ವಿದೇಶಿ ವ್ಯಾಪಾರಿಗಳ ಪ್ರವೇಶವು, ಇವುಗಳ ಬಗ್ಗೆ ರಾಜಕೀಯ ಚರ್ಚೆ ಹಾಗು ಅಸಮಧಾನದ ಮಧ್ಯೆಯೇ ನಡೆಯುತ್ತಿದೆ. *⃣ಭಾರತ ಎದುರಿಸುವ ಸಾಮಾಜಿಕ ಹಾಗು ಆರ್ಥಿಕ ಸಮಸ್ಯೆಗಳೆಂದರೆ ಹೆಚ್ಚುತ್ತಿರುವ ಜನಸಂಖ್ಯೆ, ನಿರುದ್ಯೋಗ ಬಡತನ, ಅಸಮಾನತೆ ಹಾಗು ಉತ್ತಮ ಗುಣಮಟ್ಟದ ಮೂಲಭೂತ ಸೌಕರ್ಯದ ಕೊರತೆ. ಭಾರತದಲ್ಲಿ ಬಡತನವು ೧೯೮೦ ರಿಂದ, ಕೇವಲ ಶೇಕಡ ೧೦% ರಷ್ಟು ಇಳಿದಿದೆ.

Comments

Popular posts from this blog

ಕರ್ನಾಟಕದ ಪ್ರಥಮಗಳು

KPSC KAS FDA SDA

Geography (ಭೂಗೋಳಶಾಸ್ತ್ರ)