Indian Geography
ಉತ್ತರದ ಪರ್ವತಗಳು
ಭಾರತದ ಈಶಾನ್ಯ ಮತ್ತು ಉತ್ತರ ದಿಕ್ಕಿನ ಭಾಗಗಳಲ್ಲಿ ವಿಭಿನ್ನ ಪರ್ವತ ಶ್ರೇಣಿಗಳನ್ನು, ಹಿಮಾಲಯ ಪರ್ವತ ಶ್ರೇಣಿಗಳನ್ನು, ಆಳವಾದ ಕಣಿವೆಗಳನ್ನು ಮತ್ತು ಹಿಮನದಿಗಳನ್ನು ಕಾಣಬಹುದು.
ಹಿಮಾಲಯ ಪರ್ವತ ಶ್ರೇಣಿಯು "ಪಾಮಿರ್ ಗ್ರಂಥಿ"ಯಿಂದ ಆರಂಭವಾಗಿ ಪೂರ್ವ ಭಾಗದಲ್ಲಿ "ನಾಗಾಲ್ಯಾಂಡ್" ವರೆಗೂ (ಸುಮಾರು 2500km ಉದ್ದ) ಹರಡಿದೆ. ಹಿಮಾಲಯ ಪರ್ವತ ಶ್ರೇಣಿಗಳು 'ಅಂಗಾರ' ಮತ್ತು 'ಗೊಂಡ್ವಾನ' ಭೂರಾಶಿಗಳ ಒತ್ತರಿಸುವಿಕೆಯಿಂದ ವಿವಿಧ ಕಾಲಾವಧಿಯಲ್ಲಿ ನಿರ್ಮಾಣಗೊಂಡಿವೆ. ಈ ಮಡಿಕೆ ಪರ್ವತ ಶ್ರೇಣಿಯಲ್ಲಿ ಮೂರು ಸಮಾನಾಂತರವಾದ ಶ್ರೇಣಿಗಳನ್ನು ಕಾಣಬಹುದು.
*⃣ಅವುಗಳೆಂದರೆ :
ಮಹಾ ಹಿಮಾಲಯಮಧ್ಯ ಹಿಮಾಲಯಸಿವಾಲಿಕ್ ಬೆಟ್ಟಗಳು
*⃣ಮಹಾ ಹಿಮಾಲಯ
# ಇದು ಹಿಮಾಲಯ ಪರ್ವತಗಳಲ್ಲಿ ಅತ್ಯಂತ ಎತ್ತರದ ಶ್ರೇಣಿಯಾಗಿದೆ.
# ಇದು ಪಶ್ಚಿಮದಲ್ಲಿ 'ನಂಗಾಪರ್ವತ' ದಿಂದ ಪೂರ್ವದಲ್ಲಿ 'ನಾಮಚಬರ್ವಾ' ಶಿಖರದ ವರೆಗೂ ಹರಡಿಕೊಂಡಿದೆ.
# ಸಮುದ್ರ ಮಟ್ಟದಿಂದ ಸರಾಸರಿ ಸುಮಾರು 6,000 ಮೀಟರ್ ಎತ್ತರದಲ್ಲಿದೆ.
# ಈ ಶ್ರೇಣಿಯು ಸದಾಕಾಲ ಹಿಮದಿಂದ ಆವೃತವಾಗಿರುವ ಕಾರಣದಿಂದ ಇದನ್ನು "ಹಿಮಾದ್ರಿ" ಎನ್ನುವರು.
# ಪ್ರಪಂಚದ ಅತ್ಯಂತ ಎತ್ತರವಾದ ಶಿಖರ 'ಮೌಂಟ್ ಎವರೆಸ್ಟ್' ನೇಪಾಳ ಮತ್ತು ಟಿಬೆಟ್ ಮಧ್ಯದಲ್ಲಿ ಕಾಣಬಹುದು.
# ಭಾರತದ ಅತ್ಯಂತ ಎತ್ತರವಾದ ಶಿಖರ ಕಾರಕೋರಂ ಶ್ರೇಣಿಯಲ್ಲಿರುವ "ಮೌಂಟ್ ಗಾಡ್ವಿನ್ ಆಸ್ಟಿನ್" ಅಥವಾ "(K2)" .
# ಈ ಶ್ರೇಣಿಯ ಎತ್ತರವಾದ ಶಿಖರಗಳಿಗೆ ಉದಾ: ಕಾಂಚನ ಜುಂಗಾ, ಧವಳಗಿರಿ, ಮಾಕಲು, ನಂಗಾ ಪರ್ವತ, ನಂದಾದೇವಿ ಮತ್ತು ಗೌರಿ ಶಂಕರ.
# ಪ್ರಮುಖ ಹಿಮನದಿ 'ಗಂಗೋತ್ರಿ' (ಗಂಗಾ ನದಿಯ ಉಗಮ ಸ್ಥಾನವಾಗಿದೆ.)
*⃣ಮಧ್ಯ ಹಿಮಾಲಯ
# ಈ ಶ್ರೇಣಿಯು ಸಮುದ್ರ ಮಟ್ಟದಿಂದ ಸುಮಾರು 3,600ಮೀಟರ್ ಗಳಿಂದ 4,500 ಮೀಟರ್ ಗಳಷ್ಟು ಎತ್ತರವಾಗಿದೆ.
# ಕೆಲವು ಶಿಖರಗಳು ಹಿಮದಿಂದ ಆವೃತವಾಗಿದೆ ಮತ್ತು ಉತ್ತರ ಭಾಗದಲ್ಲಿ ಅರಣ್ಯಗಳನ್ನು ಕಾಣಬಹುದು.
# ಇಲ್ಲಿ ಕಾಣಬಹುದಾದ ಪ್ರಮುಖ ಕಣಿವೆಗಳು ಕಾಂಗ್ರಾ, ಲಾಹುಲ್, ಕಾಶ್ಮೀರ ಕಣಿವೆ ಮತ್ತು ಕುಲು.
# ಪ್ರಮುಖ ಶ್ರೇಣಿಗಳಿಗೆ ಉದಾಹರಣೆ ಧವಲ್ ಧರ್, ಮಸ್ಸೂರಿ ಮತ್ತು ಪಿರ್ ಪಂಜಾಲ್.
# ನೈನಿತಾಲ್, ಡಾರ್ಜಲಿಂಗ್, ಸಿಮ್ಲಾ, ರಾಣಿಖೇತ್ ಮತ್ತು ಮಸ್ಸೂರಿ ಇಲ್ಲಿರುವ ಪ್ರಮುಖ ಗಿರಿಧಾಮಗಳು.
*⃣ಶಿವಾಲಿಕ್ ಬೆಟ್ಟಗಳು
# ಶಿವಾಲಿಕ್ ಎಂಬುದು ಹಿಮಾಲಯದ ಹೊರವಲಯದಲ್ಲಿರುವ ಅತ್ಯಂತ ದಕ್ಷಿಣ ಭಾಗ.
# ಶಿವಾಲಿಕ್ ಬೆಟ್ಟಗಳನ್ನು 'ಹಿಮಾಲಯದ ಪಾದಬೆಟ್ಟ'ಗಳೆಂದು ಕರೆಯುತ್ತಾರೆ.
# ಈ ಶ್ರೇಣಿಯು ಹಿಮಾಲಯದಿಂದ ಹರಿದುಬರುವ ನದಿಗಳು ಹೊತ್ತುತಂದ ವಸ್ತುಗಳ ಸಂಚಯನದಿಂದ ನಿರ್ಮಾಣವಾಗಿದೆ.
# ಇದರ ಎತ್ತರ ಸುಮಾರು 1,300 ಮೀಟರ್ ಗಳು.
# ಇದರಲ್ಲಿ ಸಮತಟ್ಟಾದ ಹಾಗೂ ಕಿರಿದಾದ ಅನೇಕ ಮೈದಾನಗಳಿವೆ, ಇವುಗಳನ್ನು 'ಡೂನ್' ಗಳೆಂದು ಕರೆಯುತ್ತಾರೆ. ಉದಾ: ಡೆಹರಾಡೂನ್.
*⃣ಹಿಮಾಲಯದ ಎತ್ತರ ಐದು ಶಿಖರಗಳು
ಶಿಖರ ದೇಶ ಎತ್ತರ (ಮೀ.)
1. ಮೌಂಟ್ ಎವರೆಸ್ಟ್ ನೇಪಾಳ - ಟಿಬೆಟ್ 8,848
2. ಗಾಡ್ವಿನ್ ಆಸ್ಟೀನ್ (K2)ಭಾರತ8,611
3. ಕಾಂಚನ ಜುಂಗಾ ನೇಪಾಳ - ಭಾರತ8,597
4. ಧವಳಗಿರಿನೇಪಾಳ 8,167
5. ನಂಗಾ ಪರ್ವತ ಭಾರತ8,126
Hard Rock Hotel & Casino Hollywood, MD - Mapyro
ReplyDeleteFind out which of 광주 출장안마 34 Hard Rock Hotel & Casino 삼척 출장안마 Hollywood is the best? We compare hotel prices, photos & reviews, and find the best deal 나주 출장안마 for the Hard 보령 출장샵 Rock 충청남도 출장안마 Hotel