The Earth ಭೂಮಿ
ಭೂಮಿ
ಭೂಮಿ
ಭೂಮಿಯು (ಸೂರ್ಯನಿಂದ 1 ಖ.ಮಾ. = ಸೂರ್ಯನಿಂದ 15ಕೋಟಿ ಕಿ.ಮೀ.(ಖಗೋಲಮಾನ) ದೂರದಲ್ಲಿದೆ.
ನಿಖರ ಸರಾಸರಿ ದೂರ 149,598,023 ಕಿಮೀ.(92,955,902 ಮೈಲಿ: ಸೌರ ದಿನಗಳ ಅವಧಿ ಭೂಮಿ ಯ ಉಪಸೌರ ಮತ್ತು ಅಪರವಿ ನಡುವಿನ ವ್ಯತ್ಯಾಸ 50 ಲಕ್ಷ ಕಿ.ಮೀ.
ಇದು ಭೂಮಿ ಸೂರ್ಯನನ್ನು ಸುತ್ತುವಾಗ ಹತ್ತಿರದ ಮತ್ತು ದೂರದ ಬಿಂದುಗಳ ವ್ಯತ್ಯಾಸ.
ಭೂಮಿಯ ದ್ರವ್ಯರಾಶಿಯು ಸುಮಾರು 5.98×10 24 ಕಿ.ಗ್ರಾಮ್.ಗಳಷ್ಟಿದೆ.
ಪರಿಭ್ರಮಣ ಕಕ್ಷೆ ಅಂಡಾಕಾರವಾಗಿದೆ).
ಸರಾಸರಿ ತ್ರಿಜ್ಯ 6,372.797 ಕಿ.ಮೀ. ಒಳ ನೈಸರ್ಗಿಕ ಗ್ರಹಗಳಲ್ಲಿ ಇದು ದೊಡ್ಡದು ಮತ್ತು ಹೆಚ್ಚಿನ ಸಾಂದ್ರತೆ (ದಟ್ಟಣೆ)ಯದು.
ಪ್ರಸ್ತುತ ತಿಳಿದಂತೆ ಭೂವೈಜ್ಞಾನಿಕ ಚಟುವಟಿಕೆಯುಳ್ಳ ಮತ್ತು ಜೀವ ಜಾಲ ಅಸ್ತಿತ್ವದಲ್ಲಿರುವ ಒಂದೇ ಗ್ರಹ.
ಭೂಮಿಯ ಜಲಗೋಳ ಗ್ರಹಗಳಲ್ಲಿ ವಿಶಿಷ್ಟವಾಗಿದೆ ಮತ್ತು ಇತರ ಗ್ರಹಗಳಲ್ಲಿ ಕಾಣದ ವಿಶಿಷ್ಟ ಗಮನಾರ್ಹವಾದ ಶಿಲಾಪದರ ರಚನೆಗಳನ್ನು ಹೊಂದಿರುವ ಏಕೈಕ ಗ್ರಹ.
ಭೂಮಿಯ ವಾತಾವರಣದಲ್ಲಿ ಜೀವಿಗಳ ಅಸ್ತಿತ್ವಕ್ಕೆ ಬೇಕಾದ 21% ಆಮ್ಲಜನಕ ಹೊಂದಿರುವ ವಾತಾವರಣವಿದ್ದು ಇತರ ಗ್ರಹಗಳ ವಾತಾವರಣಕ್ಕೆ ಸಂಪೂರ್ಣವಾಗಿ ಭಿನ್ನವಾಗಿದೆ.
Comments
Post a Comment