Geography (ಭೂಗೋಳಶಾಸ್ತ್ರ)
ವಿಷಯ :- ಭೂಗೋಳಶಾಸ್ತ್ರ.
ಸಂಗ್ರಹ :- ಪ್ರಥಮ ಪಿಯುಸಿ ಭೂಗೋಳಶಾಸ್ತ್ರ.
1) "ಭೂಗೋಳಶಾಸ್ತ್ರದ ಪಿತಾಮಹ" ಯಾರು?
* ಎರಟಾಸ್ತನಿಸ್.
2) "ಜಿಯೋಗ್ರಫಿ" ಯಾವ ಎರಡು ಪದಗಳಿಂದ ಬಂದಿದೆ?
* 'ಗ್ರೀಕ್' ಭಾಷೆಯ ಜಿಯೋ ಮತ್ತು ಗ್ರಪೋಸ್.
3) "ಎಲ್ಲಾ ವಿಜ್ಞಾನಗಳ ಮಾತೃ" ಎಂದು ಯಾವ ಶಾಸ್ತ್ರವನ್ನು ಕರೆಯುತ್ತಾರೆ?
* ಭೂಗೋಳಶಾಸ್ತ್ರ.
4) ಸೌರವ್ಯೂಹದ ಒಂದು ಸದಸ್ಯ ಗ್ರಹ ಯಾವುದು?
* ಭೂಮಿ.
5) "ಭೂಮಿಯು ಗೋಳಾಕಾರವಾಗಿದೆ" ಎಂಬುದನ್ನು ನಿರೂಪಿಸುವುದು ಯಾವ ಗ್ರಹಣ?
* ಚಂದ್ರಗ್ರಹಣ.
6) ಭೂಮಿ ಮತ್ತು ಅದರ ನಿವಾಸಿಗಳ ಬಗ್ಗೆ ತಿಳಿಸುವ ಭೂಗೋಳಶಾಸ್ತ್ರ ಯಾವುದು?
* ಆಧುನಿಕ ಭೂಗೋಳಶಾಸ್ತ್ರ.
7) 'ಭೂಪ್ರದಕ್ಷಿಣೆ'ಯನ್ನು ಪ್ರಥಮವಾಗಿ ಪೂರ್ಣಗೊಳಿಸಿದವರು ಯಾರು?
* ಫರ್ಡಿನೆಂಡ್ ಮೆಗಲನ್.
8) ಪ್ರಪಂಚದ ಮೊದಲ ನಕ್ಷೆಯನ್ನು ರಚಿಸಿದವರು ಯಾರು?
* ಎರಟಾಸ್ತನಿಸ್.
9) ಪ್ರಪಂಚದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಎತ್ತರ ಎಷ್ಟು?
* 8850 ಮೀ.
10) "ನಿಕೋಲಸ್ ಕೊಪರ್ನಿಕಸ್" ಯಾವ ದೇಶದ ಖಗೋಳಶಾಸ್ತ್ರಜ್ಞ?
* ಪೋಲ್ಯಾಂಡ್.
11) ಭೂಮಿಯು ಸೂರ್ಯನ ಹತ್ತಿರದಲ್ಲಿ ಕಂಡು ಬರುವ ದಿನ ಯಾವುದು?
* ಜನವರಿ 3.
12) ಬೇಸಿಗೆ ಕಾಲದ ಅವಧಿ ತಿಳಿಸಿ?
* ಜೂನ್ 21 ರಿಂದ ಸೆಪ್ಟೆಂಬರ್ 22 ರವರೆಗೆ.
13) "ಮಧ್ಯರಾತ್ರಿಯ ಸೂರ್ಯನ ನಾಡು" ಯಾವುದು?
* ನಾರ್ವೆ.
14) ಭೂಮಿಯ ಹೊರ ಪದರಕ್ಕೆ ------- ಎಂದು ಕರೆಯುತ್ತಾರೆ?
* ಭೂಕವಚ.
15) ಭೂಮಿಯ ಅಂತರಾಳದ ಅತ್ಯಂತ ಒಳಪದರು ಯಾವುದು?
* ಕೇಂದ್ರಗೋಳ.
16) "ಕೊಲಾಬಾ" ಭೂಕಂಪ ದಾಖಲು ಕೇಂದ್ರ ಯಾವ ರಾಜ್ಯದಲ್ಲಿದೆ?
* ಮಹಾರಾಷ್ಟ್ರ.
17) ಎಲ್ ಡಬ್ಲ್ಯೂ ಅಲೆಗಳು ಅಂದರೆ ಯಾವು?
* ಮೇಲ್ಮೈ ಅಲೆಗಳು.
18) ಜ್ವಾಲಮುಖಿಯ ವಸ್ತುಗಳು ಹೊರ ಹರಿಯುವ ಭೂಕವಚದಲ್ಲಿನ ರಂಧ್ರ ಪ್ರದೇಶಕ್ಕೆ ---- ಎನ್ನುವರು?
* ನಾಳ.
19) "ಬ್ಯಾರನ್ ದ್ವೀಪ'' ಎಲ್ಲಿದೆ?
* ಅಂಡಮಾನ್ ಮತ್ತು ನಿಕೊಬಾರ್.
20) "ಬಸಾಲ್ಟ್" ಯಾವ ಅಗ್ನಿಶಿಲೆಗೆ ಉದಾಹರಣೆ?
* ಬಹಿಸ್ಸರಣ ಅಗ್ನಿಶಿಲೆಗಳಿಗೆ.
21) ಜಿಯೋ ಮತ್ತು ಗ್ರಪೋಸ್ ಎಂದರೆ -----.
* ಜಿಯೋ - ಭೂಮಿ,
ಗ್ರಪೋಸ್ - ಅಧ್ಯಯನ/ವಿವರಣೆ.
22) ಮೊಟ್ಟ ಮೊದಲಿಗೆ ಭೂಅಕ್ಷದ ಓಲುವಿಕೆಯನ್ನು ಲೆಕ್ಕಾಚಾರ ಹಾಕಿ ತಿಳಿಸಿದವನು ಯಾರು?
* ಎರಟಾಸ್ತನಿಸ್.
23) ಚಳಿಗಾಲದ ಅವಧಿ ತಿಳಿಸಿರಿ?
* ಡಿಸೆಂಬರ್ 22 ರಿಂದ ಮಾರ್ಚ್ 20 ರವರೆಗೆ.
24) "ಕಾನ್ರಾಡ್ ಸಿಮಾವಲಯ" ಯಾವ ಪದರಗಳ ನಡುವೆ ಕಂಡು ಬರುತ್ತದೆ?
* ಸಿಯಾಲ್ ಮತ್ತು ಸೀಮಾ ಪದರಗಳ ನಡುವೆ.
25) ನಿಕ್ಕಲ್ ಮತ್ತು ಕಬ್ಬಿಣ ವಸ್ತುಗಳು ಪ್ರಧಾನವಾಗಿದ್ದು ಯಾವ ಗೋಳದಲ್ಲಿ?
* ಕೇಂದ್ರಗೋಳದಲ್ಲಿ.
26) ಭೂಕಂಪಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವದನ್ನು ------ ಎಂದು ಕರೆಯುವರು?
* ಭೂಕಂಪಶಾಸ್ತ್ರ/ಸಿಸ್ಮೋಲಜಿ.
27) 26-12-2004 ರಲ್ಲಿ "ಬಂಡಾ ಏಚ್ ಸುನಾಮಿ" ಸಂಭವಿಸಿದ್ದು ಯಾವ ರಾಷ್ಟ್ರದಲ್ಲಿ?
* ಇಂಡೋನೇಷಿಯಾ.
28) ದ್ವಿತೀಯ ಅಲೆಗಳನ್ನು ಏನೆಂದು ಕರೆಯುವರು?
* ಅಡ್ಡಅಲೆಗಳು / ಕುಲುಕು ಅಲೆಗಳೆಂದು.
29) ಇಂಡೋನೇಷಿಯಾದ "ಕ್ರಕಟೋವ ಪರ್ವತ" ಜ್ವಾಲಮುಖಿಯು ಯಾವ ಜ್ವಾಲಮುಖಿಗೆ ಉದಾಹರಣೆ?
* ಸುಪ್ತ ಜ್ವಾಲಮುಖಿಗೆ.
30) "ಕೋಟಪಾಕ್ಷಿ" ಜಾಗೃತ ಜ್ವಾಲಮುಖಿ ಯಾವ ರಾಷ್ಟ್ರದ್ದು?
* ಈಕ್ವೆಡಾರ್.
31) ಜಗತ್ತಿನ ಅತಿ ಹೆಚ್ಚು ಜ್ವಾಲಮುಖಿಗಳು ಯಾವ ವಲಯದಲ್ಲಿ ದಾಖಲಾಗಿವೆ?
* ಫೆಸಿಫಿಕ್ ಸಾಗರದ ಸುತ್ತಲಿನ ವಲಯ.
32) ಜಿಪ್ಸಂ ಯಾವ ಕಣಶಿಲೆಗಳಿಗೆ ಉದಾಹರಣೆ?
* ರಾಸಾಯನಿಕವಾಗಿ ಉಂಟಾದ ಕಣಶಿಲೆಗಳಿಗೆ.
33) "ಫರ್ಡಿನೆಂಡ್ ಮೆಗಲನ್" ಯಾವ ದೇಶದ ಅನ್ವೇಷಣೆಕಾರ?
* ಪೋರ್ಚುಗೀಸ್.
34) ಮೊಟ್ಟ ಮೊದಲಿಗೆ "ಭೂಗೋಳಶಾಸ್ತ್ರ" (ಜಿಯೋಗ್ರಫಿ) ಪದವನ್ನು ಬಳಸಿದವನು ಯಾರು?
* ಎರಟಾಸ್ತನಿಸ್.
35) ಭೂಮಿಯ ಮೇಲಿನ ಅತ್ಯಂತ ತಗ್ಗಾದ ಭಾಗ ಯಾವುದು?
* ಮೃತ ಸಮುದ್ರ (ಸಮುದ್ರ ಮಟ್ಟದಿಂದ 400 ಮೀ ಆಳ).
36) "ಮೃತ ಸಮುದ್ರ" ಕಂಡು ಬರುವುದು ಯಾವ ಖಂಡದಲ್ಲಿ?
* ಏಷ್ಯಾ.
37) ಭೂಮಿಯು ತನ್ನ ಅಕ್ಷದ ಸುತ್ತಲೂ ಪಶ್ಚಿಮದಿಂದ ಪೂರ್ವಕ್ಕೆ ಸುತ್ತುವದನ್ನು ----- ಎನ್ನುವರು?
* ಭೂ ಅಕ್ಷಭ್ರಮಣ / ದೈನಂದಿನ ಚಲನೆ.
38) ಶರತ್ಕಾಲದ ಅವಧಿ ತಿಳಿಸಿರಿ?
* ಸೆಪ್ಟೆಂಬರ್ 23 ರಿಂದ ಡಿಸೆಂಬರ್ 21 ರವರೆಗೆ.
39) ಭೂ ಅಂತರಾಳದಲ್ಲಿನ ಕವಚದ ಒಳಭಾಗವನ್ನು ---- ಎಂದು ಕರೆಯುವರು?
* ಮ್ಯಾಂಟಲ್.
40) ಸಾಗರೀಕ ಕವಚವು ಅಧಿಕವಾಗಿ ಸಿಲಿಕ ಮತ್ತು ಮ್ಯಾಗ್ನೀಷಿಯಂ ಅಂಶಗಳನ್ನು ಒಳಗೊಂಡಿರುವುದರಿಂದ ---- ಎಂದು ಕರೆಯಲಾಗಿದೆ?
* ಸೀಮಾ.
41) ಜಗತ್ತಿನ ಅತ್ಯಂತ ಆಳವಾದ ಗಣಿ ಯಾವುದು?
* ಟೌ ಟೋನ ಗಣಿ (3.9 ಕಿ.ಮೀ ಆಳ) (ಆಫ್ರಿಕಾ).
42) 'ಸುನಾಮಿ'ಯ ಅರ್ಥ ತಿಳಿಸಿರಿ?
* ಸು - ಬಂದರು,
ನಾಮಿ - ಅಲೆ ಎಂದರ್ಥ.
*ಭಾರತದ ಚಿನ್ಹೆಗಳು*
1] ರಾಷ್ಟ್ರಧ್ವಜ :
ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ
3:2.
ಭಾರತದ ರಾಷ್ಟ್ರಧ್ವಜವು ಕೇಸರಿ, ಬಿಳಿ ಮತ್ತು
ಹಸಿರು ಬಣ್ಣಗಳನ್ನು ಹೊಂದಿದೆ.
ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24
ಕಡ್ಡಿಗಳನ್ನು ಹೊಂದಿದ್ದು ನೀಲಿ ಬಣ್ಣದಿಂದ ಕೂಡಿದೆ.
ಇದನ್ನು ಸಾರನಾಥದ ಅಶೋಕನ ಸ್ಥಂಭದಿಂದ
ಆರಿಸಿಕೊಳ್ಳಲಾಗಿದೆ.
ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ
1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು.
ಭಾರತದ ಧ್ವಜಸಂಹಿತೆ 26 ಜನವರಿ 2002 ರಂದು
ಜಾರಿಗೆ ಬಂದಿತು.
ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು
ಮೂಲಭೂತ ಹಕ್ಕು ಎಂದು ಕಲಂ 19(i)
ವಿವರಿಸುವುದು.
ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ
ತಯಾರಿಸಿದವರು ಮೇಡಂ ಭೀಕಾಜಿ ಕಾಮಾ.
ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ
ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ್
ಅಧಿವೇಶನದಲ್ಲಿ ಜವಾಹರಲಾಲ ನೆಹರೂ
ಹಾರಿಸಿದರು.
ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ
ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು.
ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಾಳಿ
ವೆಂಕಯ್ಯ.
ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ
ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ.
2] ರಾಷ್ಟ್ರೀಯ ಚಿನ್ಹೆ :
ಭಾರತದ ರಾಷ್ಟ್ರೀಯ ಚಿನ್ಹೆಯನ್ನು ಉತ್ತರ
ಪ್ರದೇಶದಲ್ಲಿ ಅಶೋಕನು ಹೊರಡಿಸಿರುವ
ಸಾರನಾಥದ ಸ್ಥಂಭದಿಂದ ಪಡೆಯಲಾಗಿದೆ.
ಇದರಲ್ಲಿ ನಾಲ್ಕು ಸಿಂಹಗಳು, ನೆಗೆಯುತ್ತಿರುವ ಕುದುರೆ,
ಗೂಳಿ ಮತ್ತು ಆನೆಗಳಿವೆ. ಮಧ್ಯದಲ್ಲಿ ಧರ್ಮಚಕ್ರವಿದೆ.
ಭಾರತ ಸರ್ಕಾರವು ಇದನ್ನು 26 ಜನವರಿ 1950 ರಂದು
ಅಳವಡಿಸಿಕೊಂಡಿತು.
ಇದರ ಕೆಳಗೆ ಮಂಡಕೋಪನಿಷತ್ತಿನಿಂದ ಪಡೆದಿರುವ
ಸತ್ಯಮೇವ ಜಯತೇ ಯನ್ನು ದೇವನಾಗರಿ ಲಿಪಿಯಲ್ಲಿ
ಬರೆಯಲಾಗಿದೆ.
3] ರಾಷ್ಟ್ರೀಯ ಹೂವು :
ಭಾರತದ ಪುಷ್ಪ - ಕಮಲದ ಹೂವು.
ಕಮಲದ ವೈಜ್ಞಾನಿಕ ಹೆಸರು - ನೆಲುಂಬೊ ನ್ಯುಸಿಫೆರಾ
(Nelumbo nucifera)
4] ರಾಷ್ಟ್ರಗೀತೆ :
ಭಾರತದ ರಾಷ್ಟ್ರಗೀತೆ 'ಜನಗಣಮನ".
ಮೂಲತಃ ಇದು ಬಂಗಾಳಿ ಭಾಷೆಯಲ್ಲಿದ್ದು ಇದನ್ನು
ರಚಿಸಿದವರು ರವೀಂದ್ರನಾಥ ಟ್ಯಾಗೋರ್.
ಸಂವಿಧಾನ ರಚನಾ ಸಭೆಯು ಹಿಂದಿ ಭಾಷಾಂತರದ
ರಾಷ್ಟ್ರಗೀತೆಯನ್ನು 24 ಜನವರಿ 1950 ರಂದು
ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು.
ಈ ಗೀತೆಯನ್ನು ಮೊದಲಿಗೆ 1911 ರ ಕಲ್ಕತ್ತಾ ಕಾಂಗ್ರೆಸ್
ಅಧಿವೇಶನದಲ್ಲಿ ಹಾಡಲಾಯಿತು.
ಭಾರತದ ರಾಷ್ಟ್ರಗೀತೆಯಲ್ಲಿ ಒಟ್ಟು 13 ಸಾಲುಗಳಿವೆ.
ರಾಷ್ಟ್ರಗೀತೆಯನ್ನು 48 ಸೆಕೆಂಡುಗಳಿಗೆ ಕಡಿಮೆ
ಇಲ್ಲದಂತೆ ಹಾಗೂ 52 ಸೆಕೆಂಡುಗಳು ಮೀರದಂತೆ
ಹಾಡುವ ನಿಯಮವಿದೆ.
5] ರಾಷ್ಟ್ರೀಯ ಹಾಡು :
ಸಂಸ್ಕ್ರತದಲ್ಲಿರುವ ವಂದೇ ಮಾತರಂ ಈ ಗೀತೆಯನ್ನು
ಭಾರತದ ಸಂವಿಧಾನ ರಚನಾ ಸಭೆಯು ಜನವರಿ 24,
1950 ರಂದು ಅಳವಡಿಸಿಕೊಂಡಿತು.
ಈ ಗೀತೆಯನ್ನು ಬಂಕೀಮಚಂದ್ರ ಚಟರ್ಜಿ
ಚಟ್ಟೋಪಾಧ್ಯಾಯರು 1882 ರಲ್ಲಿ ರಚಿಸಿದ
'ಆನಂದಮಠ' ಕಾದಂಬರಿಯಿಂದ
ಆಯ್ದುಕ್ಕೊಳ್ಳಲಾಗಿದೆ.
ಈ ಗೀತೆಯನ್ನು ಮೊಟ್ಟಮೊದಲಿಗೆ 1896 ರ ಕಲ್ಕತ್ತಾದ
ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.
ಈ ಗೀತೆಯನ್ನು 1920 ರಲ್ಲಿ ಇಂಗ್ಲೀಷ ಭಾಷೆಗೆ
ಭಾಷಾಂತರಿಸಿದವರು ಶ್ರೀಅರವಿಂದೋ ಘೋಷ್.
6] ರಾಷ್ಟ್ರೀಯ ಪಂಚಾಂಗ:
ರಾಷ್ಟ್ರೀಯ ಪಂಚಾಂಗವು ಶಕ ವರ್ಷವನ್ನು ಆಧರಿಸಿದ
ಗ್ರೇಗೋರಿಯನ್ನ ಪಂಚಾಂಗವನ್ನು ಹೋಲುತ್ತದೆ.
ಇದನ್ನು ಮಾರ್ಚ 22, 1957 ರಂದು
ಅವಡಿಸಿಕ್ಕೊಳಲಾಗಿದೆ.
ಭಾರತದ ರಾಷ್ಟ್ರೀಯ ಪಂಚಾಂಗದ ಪ್ರಕಾರ
ಮೊದಲನೇ ತಿಂಗಳು - ಚೈತ್ರ.
ಕೊನೆಯ ತಿಂಗಳು - ಫಾಲ್ಗುಣ.
ರಾಷ್ಟ್ರೀಯ ಪಂಚಾಂಗದ ತಿಂಗಳುಗಳು:
ಚೈತ್ರ, ವೈಶಾಖ, ಜೇಷ್ಟ, ಆಷಾಢ, ಶ್ರಾವಣ, ಭಾದ್ರಪದ,
ಅಶ್ವಿನ, ಕಾರ್ತಿಕ, ಮೃಗಶಿರ, ಪುಷ್ಯ, ಮಾಘ, ಫಾಲ್ಗುಣ.
7] ರಾಷ್ಟ್ರೀಯ ಕ್ರೀಡೆ :
ಭಾರತದ ರಾಷ್ಟ್ರೀಯ ಕ್ರೀಡೆ - ಹಾಕಿ.
ಹಾಕಿ ಕ್ರೀಡೆಯಲ್ಲಿ ಒಂದು ತಂಡದಲ್ಲಿ ಒಟ್ಟು 11
ಆಟಗಾರರಿರುತ್ತಾರೆ.
ಭಾರತದ ಹಾಕಿಯ ಮಾಂತ್ರಿಕ - ಧ್ಯಾನಚಂದ್.
ಧ್ಯಾನಚಂದರವರ ಹುಟ್ಟು ಹಬ್ಬದ ದಿನವಾದ
ಆಗಸ್ಟ್-29 ನ್ನು ಪ್ರತಿವರ್ಷ ಭಾರತದಲ್ಲಿ ರಾಷ್ಟ್ರೀಯ
ಕ್ರೀಡಾ ದಿನವಾಗಿ ಆಚರಿಸುವರು.
ಇಂದಿರಾಗಾಂಧಿ ಗೋಲ್ಡ್ ಕಪ್ ಭಾರತದ ಪ್ರಮುಖ
ಹಾಕಿ ಕ್ರೀಡೆಯ ಟ್ರೋಫಿಯಾಗಿದೆ.
ಅಂತರರಾಷ್ಟ್ರೀಯ ಹಾಕಿ ಪಂದ್ಯವೊಂದರ ಅವಧಿ -
70 ನಿಮಿಷಗಳು.
8] ರಾಷ್ಟ್ರೀಯ ನದಿ :
ಭಾರತದ ರಾಷ್ಟ್ರೀಯ ನದಿ - ಗಂಗಾನದಿ.
ನವೆಂಬರ್ 04, 2008 ರಂದು ಗಂಗಾನದಿಯನ್ನು
ಭಾರತದ ರಾಷ್ಟ್ರೀಯ ನದಿಯನ್ನು ಪ್ರಧಾನಮಂತ್ರಿಗಳು
ಘೋಷಿಸಿದರು.
ಭಾರತದಲ್ಲಿ ಹರಿಯುವ ನದಿಗಳಲ್ಲಿ ಗಂಗಾ ನದಿ ಅತಿ
ಉದ್ದವಾಗಿದೆ(2510 km).
ಗಂಗಾ ನದಿ ಪ್ರಾಧಿಕಾರ ಸಂಸ್ಥೆ ಇರುವುದು ಬಿಹಾರದ
ಪಾಟ್ನಾದಲ್ಲಿ.
9] ರಾಷ್ಟ್ರೀಯ ಜಲಪ್ರಾಣಿ :
ಭಾರತ ಸರ್ಕಾರವು ಅಕ್ಟೋಬರ್ 05, 2009 ರಂದು
ಗಂಗಾ ನದಿಯ ಡಾಲ್ಫಿನ್ ಭಾರತದ ರಾಷ್ಟ್ರೀಯ
ಜಲಪ್ರಾಣಿ ಎಂದು ಘೋಷಿಸಿದೆ.
ಡಾಲ್ಫಿನದ ವೈಜ್ಞಾನಿಕ ಹೆಸರು - ಪ್ಲಾಂಟಾನಿಷ್ಟಾ
ಗ್ಯಾಂಗ್ಯಾಟಿಕಾ(Platanista gangetica).
10] ರಾಷ್ಟ್ರೀಯ ಪಕ್ಷಿ :
ಭಾರತದ ರಾಷ್ಟ್ರೀಯ ಪಕ್ಷಿ - ನವಿಲು.
DRxkhanderay
ಮಂಡ್ಯ ಜಿಲ್ಲೆ ಆದಿಚುಂಚನಗಿರಿ ಹಾಗೂ ಹಾವೇರಿ
ಜಿಲ್ಲೆಯ ಬಂಕಾಪೂರದಲ್ಲಿ ನವಿಲು
ವನ್ಯಧಾಮಗಳಿವೆ.
ನವಿಲಿನ ವೈಜ್ಞಾನಿಕ ಹೆಸರು - ಪಾವೋ ಕ್ರಿಸ್ಟಾಟಸ್
Comments
Post a Comment